ಸ್ವಾಮಿ ನಿರಂಜನಾನಂದರು ರಾಮಕೃಷ್ಣ ಪರಮಹಂಸರ ಸನ್ಯಾಸಿ ಶಿಷ್ಯರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ಸಹೋದರ ಸನ್ಯಾಸಿ ಈತ. ದಕ್ಷಿಣೇಶ್ವರದ ಭವತಾರಿಣಿ ಕಾಳಿಕಾ ದೇವಾಲಯದಲ್ಲಿ, ಶ್ರೀ ರಾಮಕೃಷ್ಣ ಪರಮಹಂಸರ ಪದತಳದಲ್ಲಿ ಅರಳಿದ ಬದುಕು ಈತನದು. == ಪೂರ್ವಾಶ್ರಮ == ಪೂರ್ವಾಶ್ರಮದಲ್ಲಿ ನಿತ್ಯನಿರಂಜನ ಘೋಷ ಎಂದು ಇವರ ಹೆಸರು. ಬ್ರಹ್ಮಚರ್ಯ-ಸನ್ಯಾಸದ ನಂತರ ಇವರ ಹೆಸರು ಸ್ವಾಮಿ ನಿರಂಜನಾನಂದ ಆಯಿತು. ೧೮೬೨ನೇ ಇಸವಿಯ ಶ್ರಾವಣ ಹುಣ್ಣಿಮೆಯಂದು ಈತನ ಜನನವಾಯಿತು. ಪಶ್ಚಿಮ ಬಂಗಾಳದ ರಾಜರಹಟ್-ವಿಷ್ಣುಪುರದಲ್ಲಿ ಜನಿಸಿದರು. == ಸನ್ಯಾಸ == ಶ್ರೀರಾಮಕೃಷ್ಣ ಪರಮಹಂಸರಿಂದ ಸನ್ಯಾಸ ಸ್ವೀಕರಿಸಿದರು. ಶ್ರೀರಾಮಕೃಷ್ಣರು ಕಾಶಿಪುರದ ತೋಟದಮನೆಯಲ್ಲಿ ಗಂಟಲಿನ ಕ್ಯಾನ್ಸರ್ ನಿಂದ ಬಳಲುತ್ತಿರುವಾಗ ಅವರಿಗೆ ತುಂಬಾ ಸೇವೆಯನ್ನು ಸಲ್ಲಿಸಿದ್ದಾರೆ. ಅಖಂಡ ಭಾರತದಾದ್ಯಂತ ತೀರ್ಥಯಾತ್ರೆಮಾಡಿದ ಇವರು, ರಾಮಕೃಷ್ಣ ಮಾಹಾಸಂಘದಲ್ಲಿ ೧೯೦೪ರ ಮೇ ೯ರಂದು ಸಮಾಧಿಸ್ಥರಾದರು.